Thursday 6 December 2007

ಶಾಂತಮೂರ್ತಿ ಬುದ್ಧನ ವಿಗ್ರಹ

ಹೈದರಾಬಾದಿನ "ಹುಸೈನ್ ಸಾಗರ್" ಎಂಬ ಕೆರೆಯಲ್ಲಿ ಬುದ್ಧನ ಪ್ರತಿಮೆ ಇದೆ. ಈ ವಿಗ್ರಹ ೧೬ ಮೀಟರ್ ಎತ್ತರ ಹಾಗು ೩೫೦ ಟನ್ ತೂಕವಿದೆ. ಈ ವಿಗ್ರಹವನ್ನು ಶ್ವೇತ ಗ್ರಾನೈಟ್ ಕಲ್ಲಿನಿಂದ ಕೆತ್ತಿದ್ದಾರೆ.
ಈ ವಿಗ್ರಹವನ್ನು ೧೯೮೮ರಲ್ಲಿ ಹೈದರಾಬಾದಿಗೆ ತರಲಾಯಿತು. ಅದನ್ನು ಕೆರೆಯ ಮಧ್ಯೆ ಸಾಗಿಸುವಾಗ ಕೆರೆಯಲ್ಲಿ ಮುಳುಗಿತು. ಬಹಳ ಪ್ರಯತ್ನಗಳ ನಂತರ ೧೯೯೨ರಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಯಿತು.


No comments: