ಆಂಧ್ರಪ್ರದೇಶದ ಪ್ರಕಾಸಂ ತಾಲುಕ್ಕಿನ ಕಂಡಕೂರ್ ಎಂಬ ಪ್ರದೇಶದ ಹತ್ತಿರ ಮಲಕೊಂಡ ಎಂಬ ಸ್ಥಳವಿದೆ. ಇಲ್ಲಿನ ಪುರಾತನ 'ಜ್ವಾಲಾ ನರಸಿಂಹ ಸ್ವಾಮಿ' ದೇವಸ್ಥಾನವನ್ನು ಶನಿವಾರ ಮಾತ್ರ ದರ್ಶನಕ್ಕೆ ತೆರೆಯುತ್ತಾರೆ. ವಾರದ ೬ ದಿನಗಳು ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ! ಈ ಪದ್ದತಿಯ ಹಿಂದೆ ಕೆಲವು ಕಥೆಗಳು ಇದ್ದು, ಈ ದೇವಸ್ಥಾನವನ್ನು ಪ್ರತಿದಿನವೂ ತೆರೆಯುವ ಪ್ರಯತ್ನ ವಿಫಲವಾಗಿದೆ. ಆದ್ದರಿಂದ ಇಲ್ಲಿಯ ಜನರಿಗೆ ಈ ದೇವರು ಶನಿವಾರ ಮಾತ್ರ ದರ್ಶನ ಕೊಡುವ ಇಚ್ಛೆ ಇದೆಯೆಂಬ ನಂಬಿಕೆ.
ಸ್ಥಳ ಪುರಾಣದ ಪ್ರಕಾರ, ಅಗಸ್ತ್ಯ ಮಹರ್ಶಿಯ ವಿನಂತಿ ಮೇರೆಗೆ ನರಸಿಂಹ ಸ್ವಾಮಿ ದೇವರು ಈ ಸ್ಥಳದಲ್ಲಿ ನೆಲೆಸಿದರು. ಹಾಗು ವಾರದಲ್ಲಿ ಒಂದು ದಿನ ಮಾತ್ರ ಸಾಮಾನ್ಯ ಮನುಷ್ಯರಿಗೆ ದರ್ಶನ ನೀಡಲು ಒಪ್ಪಿ, ಮಿಕ್ಕಿದ ದಿನಗಳು ಋಷಿಗಳಿಗೆ ಮೀಸಲಿಟ್ಟರು.
ಇಲ್ಲಿನ ಒಬ್ಬ ನಾಗರಿಕರು ಹೇಳುವಂತೆ, "ಈ ದೇವಸ್ಥಾನವನ್ನು ಎಲ್ಲಾ ದಿನಗಳು ತೆರೆಯುವಂತೆ ಎಷ್ಟೋ ಪ್ರಯತ್ನಗಳು ಮಾಡಿದ್ದಾರೆ. ಆ ಪ್ರಯತ್ನ ಮಾಡಿದಾಗಲೆಲ್ಲಾ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆದಿವೆ!".
ಈ ದೇವಸ್ಥಾನವನ್ನು ಪ್ರತಿದಿನವು ತೆರೆಯುವುದಕ್ಕೆ ಅಂಗಿಕಾರವನ್ನು ನೀಡಿದ ದೇವಸ್ಥಾನ ಟ್ರಸ್ಟಿನ ಒಬ್ಬರು ಹೃದಯಾಘಾತದಿಂದ ಅಸುನೀಗಿದರು. ೧೯೯೯ ರಲ್ಲಿ, ಇದೇ ಕಾರಣಕ್ಕೆ ಇನ್ನೊಬ್ಬ ಅಧಿಕಾರಿ ಆಸ್ಪತ್ರೆ ಸೇರಬೇಕಾಯಿತು. ಹೀಗೆ ಹಲವಾರು ಘಟಣೆಗಳು ನಡೆದಿವೆ.
ಪ್ರತಿ ಶನಿವಾರ ಸುಮಾರು ೭೦೦೦ ಜನ ದೇವರ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನವನ್ನು ಪ್ರತಿದಿನ ತೆಗೆದರೆ ಎಲ್ಲರಿಗೂ ಅನಕೂಲವಾಗುತ್ತದೆ ಎಂದು ಯೋಚಿಸಿದ್ದಾರೆ. ಆದರೆ, ಈ ನಿರ್ಣಯ ತೆಗೆದುಕೊಳ್ಳುವುದ್ದಕ್ಕೆ ಎಲ್ಲರಿಗೂ ಹೆದರಿಕೆ.
ಈ ದೇವಸ್ಥಾನದ ಕೆಲವು ವಿಶೇಷಗಳೆಂದರೆ, ಈ ಮೂರ್ತಿ 'ಸ್ವಯಂಭು'. ವಿಗ್ರಹ ದಕ್ಷಿಣ ದಿಕ್ಕಿಗೆ ಮುಖ ಮಾಡಿದೆ. ಹಿರಣ್ಯಕಶ್ಯಪುವನ್ನು ಕೊಲ್ಲುವ ಭಂಗಿಯಲ್ಲಿ ಇದೆ.
ಮೂಲ: ಹೈದರಾಬಾದಿನ ದಿನಪತ್ರಿಕೆ ಡೆಕ್ಕನ್ ಕ್ರೋನಿಕಲ್, ೨೨-೧೧-೨೦೦೭, ಪುಟ: ೯
Tuesday, 27 November 2007
Subscribe to:
Post Comments (Atom)
No comments:
Post a Comment