Monday 9 February 2009

ಯಾಕೆ ಹೀಗೆ?

ಯಾಕೆ ಹೀಗೆ? ನಮ್ಮ ದೇಶದ ಟಿವಿ ಮಾಧ್ಯಮಕ್ಕೆ ಹಿಂದೂ ಎಂದರೆ ಆಗುವುದಿಲ್ಲ! ಅವಕಾಶ ಸಿಕ್ಕಿದರೆ ಸಾಕು, ನಾ ಮುಂದು ತಾ ಮುಂದು ಎಂದು ನುಗ್ಗುತ್ತಾರೆ! ಮಂಗಳೂರಿನಲ್ಲಿ ಇತ್ತೇಚೆಗೆ ನಡೆದ ಎರಡು ಘಟನೆಗಳನ್ನು ನೋಡೋಣ.

ಪಬ್ ಮೇಲೆ ನಡೆದ ದಾಳಿ, ಅಲ್ಲಿ ಇದ್ದ ಹುಡುಗರು ಹಾಗು ಹುಡುಗಿಯರ ಮೇಲೆ ನಡೆಸಿದ ದಾಳಿ ಖಂಡನೀಯ. ಇದು ಒಂದು ಸಂಘಟನೆಯ ಗೂಂಡಾಗಿರಿ! ಈ ಗೂಂಡಾಗಿರಿಯನ್ನು ಎಲ್ಲರು ಖಂಡಿಸಬೇಕು. ಶ್ರೀ ರಾಮ ಸೇನೆಗೆ ಯಾರಿಗೂ ಹೊಡೆಯುವ ಹಕ್ಕು ಇಲ್ಲ. ಆ ಪಬ್ಬಿನಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿದ್ದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಪೋಲಿಸ್-ಗೆ ದೂರು ಕೊಡಬಹುದಿತ್ತು. ಈ ಒಂದು ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಯಿತು. ಟಿವಿ ಮಾಧ್ಯಮದವರು ಈ ಘಟನೆಯನ್ನು ಹಿಂದುತ್ವಕ್ಕೆ ಜೋಡಿಸಿದರು. ಎಲ್ಲಾ ಹಿಂದೂ ಸಂಘಟನೆಗಳನ್ನು ಬೈದರು. ಭಾಜಪ ಸರ್ಕಾರವನ್ನು ಬೈದರು. ಒಂದು ಊರಿನಲ್ಲಿ ನಡೆದ ಗೂಂಡಾಗಿರಿಯು ರಾಷ್ಟ್ರೀಯ ಚರ್ಚೆಯಾಯಿತು.

ಕಳೆದ ವರ್ಷ ಹೈದರಾಬಾದಿನಲ್ಲಿ ನಡೆದ ಒಂದು ಘಟನೆಯಲ್ಲಿ, ಒಂದು ಪಕ್ಷವು ತಸ್ಲಿಮಾ ನಸ್ರೀನ್ ಮೇಲೆ ಹಲ್ಲೆ ನಡೆಸಿತು. ಆ ಪಕ್ಷದ ಚುನಾಯಿತ ಪ್ರತಿನಿಧಿ ಆ ಘಟನೆಯನ್ನು ಸಮರ್ಥಿಸಿಕೊಂಡರು. ಆ ಘಟನೆ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆಯಾದರೂ, ಯಾರೂ ಈ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಧರ್ಮದಮೇಲೆ ಚಕಾರ ಎತ್ತಲಿಲ್ಲ! ಯಾಕೆ ಹೀಗೆ?

ಇನ್ನೊಂದು ಘಟನೆಯಲ್ಲಿ, ಕೇರಳ MLAಯ ಮಗಳನ್ನು ಮತ್ತು ಅವರ ಜೊತೆ ಇದ್ದ ಒಬ್ಬ ಮುಸ್ಲಿಂ ಹುಡುಗನ ಮೇಲೆ ಒಂದು ಗುಂಪು ದಾಳಿಮಾಡಿತು. ತಕ್ಷಣ ಎಲ್ಲಾ ಮಾಧ್ಯಮದವರು ಈ ಘಟನೆಯ ಹಿಂದೆ ಹಿಂದು ಸಂಘಟನೆಯ ಕೈವಾಡವಿದೆ ಎಂದು ಬರೆದರು. ಪೋಲಿಸ್ ವಿಚಾರಣೆ ನಂತರ ತಿಳಿದುಬಂದ ವಿಷಯವೇನೆಂದರೆ, ಈ ಘಟನೆಯ ಹಿಂದೆ CPI-Mafioso ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು. ನಿಜ ಗೊತ್ತಾದಮೇಲೆ ಮಾಧ್ಯಮದವರು ಈ ವಿಚಾರವನ್ನು ಕೈ ಬಿಟ್ಟರು. ಯಾರೂ ಈ CPI-Mafioso ಪಕ್ಷವನ್ನು ವಜಾ ಮಾಡಿ ಎಂದು ಕೇಳಲಿಲ್ಲ!

ನಾನು ಯಾವುದೇ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದ್ರೆ ಮಾಧ್ಯಮದವರು ಹಿಂದು ಸಂಘಟನೆಯ ವಿಚಾರ ಬಂದಾಗ ಕೇಸರೀಕರಣ, ಹಿಂದುತ್ವ ಎಂದು ಬೊಬ್ಬೆ ಮಾಡುತ್ತಾರೆ! ಬೇರೆ ಧರ್ಮದ / ಪಕ್ಷದ ವಿಚಾರ ಬಂದಾಗ, ಬಾಯಿ ಮುಚ್ಚಿಕೊಂಡು ಇರುತ್ತಾರೆ! ಯಾಕೆ ಹೀಗೆ?

1 comment:

Hari Prasad said...

ಖಗೋಳದಲ್ಲಿ ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಗಳು. ತಮ್ಮಂತೆ ನಾನೂ ಕೂಡ IT ಉದ್ಯೋಗಿ. ತಮ್ಮ ಅಂತರ್ಜಾಲ ತಾಣಗಳನ್ನು ಕಂಡು ಖುಷಿ ಆಯಿತು. ಖಗೋಳದ ಬಗ್ಗೆ ತಮ್ಮ ಆಸಕ್ತಿ ಹೀಗೇ ಸದಾ ಕಾಲ ಇರಲಿ ಎಂದು ಬಯಸುತ್ತೇನೆ. ತಮ್ಮ ಇತರ ಪ್ರಶ್ನೆಗಳಿಗೆ ಖಗೋಳದ ಬಾಗಿಲು ಸದಾ ತೆರೆದಿರುತ್ತದೆ. ಸಂಪರ್ಕದಲ್ಲಿರಿ.
hari.prasad4@wipro.com